ಇಂದ್ರಕೀಲ
ಮಹಾಭಾರತದಲ್ಲಿ ಹೇಳಿರುವಂತೆ ಹಿಮವತ್ಪ್ರಾಂತ್ಯದ ಮಧ್ಯದಲ್ಲಿರುವ ಒಂದು ಪರ್ವತ. ವ್ಯಾಸಮಹರ್ಷಿಯ ಉಪದೇಶದ ಪ್ರಕಾರ ಇಲ್ಲಿ ತಪಸ್ಸು ಮಾಡಿದ ಅರ್ಜುನನಿಗೆ ಇಂದ್ರ ಪ್ರತ್ಯಕ್ಷನಾಗುವಂತೆ ಸಹಾಯ ಮಾಡಿದ ಪವಿತ್ರ ಸ್ಥಳ. ಅಲ್ಲದೆ ಅವನ ಸೂಚನೆಯಂತೆ ಶಿವನನ್ನೂ ಮೆಚ್ಚಿಸಿಕೊಂಡ ಅರ್ಜುನನಿಗೆ ಪಾಶುಪತವೆಂಬ ಅಸ್ತ್ರವನ್ನೂ ಈ ಕ್ಷೇತ್ರ ದೊರಕಿಸಿಕೊಡುತ್ತದೆ. ಕ್ರೋಧಹರ್ಷಗಳಿಂದ ದೂರವಾಗಿ ಶಾಂತಸ್ವಭಾವವುಳ್ಳ ತಪಸ್ವಿಗಳ ವಾಸಕ್ಕೆ ಉಚಿತವಾಗಿರುವ ಪ್ರದೇಶವೆಂದು ಪ್ರಸಿದ್ಧವಾಗಿದೆ.

(ಬಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ